ಬೆಳ್ತಂಗಡಿ: ಕಳೆದ 13 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿ ನಡೆದ ಕು. ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸೌಜನ್ಯ ತಾಯಿ ಕುಸುಮಾವತಿ ಕೊಟ್ಟ ದೂರಿನ ಬಗ್ಗೆ ಎಸ್ಐಟಿ ತನಿಖೆ ನಡೆಸುವುದಕ್ಕೆ ಮುಂದಾಗಿದೆ.

ಈ ದೂರನ್ನು ಆಧರಿಸಿ ಕುಟುಂಬಸ್ಥರು ಆರೋಪಿಸುತ್ತಿರುವ ಧರ್ಮಸ್ಥಳದ ನಿವಾಸಿಗಳಾದ ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್ ವಿಚಾರಣೆಗೆ ಹಾಜರಾಗುವುದಕ್ಕೆ ಎಸ್ಐಟಿ ತಿಳಿಸಿದ್ದು ಅದರಂತೆ ಉದಯ್ ಜೈನ್ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಬಂದಿದ್ದಾರೆ.




