Breaking
29 Jun 2026, Mon

ಕು.ಸೌಜನ್ಯ ಕೊಲೆ ಪ್ರಕರಣದಲ್ಲಿ ವಿಜಯೇಂದ್ರ ಭರವಸೆ ತಿರಸ್ಕರಿಸಿದ ತಾಯಿ ಕುಸುಮಾವತಿ

ಧರ್ಮಸ್ಥಳ: ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ಮರುತನಿಖೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದರೆ ಅದರ ಪೂರ್ತಿ ಖರ್ಚನ್ನು ಭರಿಸುವ ಬಿಜೆಪಿ ಕೊಡುಗೆಯನ್ನು ಸೌಜನ್ಯಾ ತಾಯಿ ಕುಸುಮಾವತಿ ನಿರಾಕರಿಸಿದ್ದಾರೆ.

ಸೌಜನ್ಯ ಮನೆಗೆ ಸೆ.01 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಭೇಟಿ ನೀಡಿ, ನ್ಯಾಯಕ್ಕಾಗಿ ಕುಟುಂಬ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿತ್ತು.

ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ವಿಜಯೇಂದ್ರ ನೇರವಾಗಿ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ಸೌಜನ್ಯ ಮನೆಗೆ ತೆರಳಿ ಸೌಜನ್ಯ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು.

ಬಿಜೆಪಿ ನಿಯೋಗ ಮನೆಗೆ ಬಂದು ಹೋದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕುಸುಮಾವತಿ ತನಗೆ ರಾಜಕೀಯದವರ ಮೇಲೆ ನಂಬಿಕೆ ಇಲ್ಲ. ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮನ್ನು ವಿರೋಧಿಸಿದವರು ಈಗ ಸಹಾಯ ಮಾಡಲು ಬಂದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *