Breaking
23 Dec 2024, Mon

ಅಕ್ಟೋಬರ್ 4ರಂದು ಹೆಬ್ರಿಯಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ

ಹೆಬ್ರಿ : ವಿಶ್ವ ಅಂತರಿಕ್ಷ ಸಪ್ತಾಹ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ, ಅಕ್ಟೋಬರ್ 4 ಬೆಳಿಗ್ಗೆ 9:00 ರಿಂದ 5 ರ ತನಕ ವಿಶ್ವ ಅಂತರಿಕ್ಷ ದಿನಾಚರಣೆ ನಡೆಯಲಿದ್ದು, ಇಸ್ರೋದಿಂದ ಸುಮಾರು 12 ರಿಂದ 15 ಜನ ವಿಜ್ಞಾನಿಗಳು ಸೈನ್ಸ್ ಮಾಡೆಲ್ ಗಳೊಂದಿಗೆ ಭಾಗವಹಿಸಲಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು , ವಿದ್ಯಾರ್ಥಿಗಳಿಗೆ ಮಾಡೆಲ್ ಪ್ರದರ್ಶನ, ಮಾಹಿತಿ ಜೊತೆಗೆ ಪೈಟಿoಗ್ , ರಸಪ್ರಶ್ನೆ , ಬುದ್ಧಿಮತ್ತೆ ಪರೀಕ್ಷೆ ನಡೆಸಲಾಗುವುದು .

ಆಸಕ್ತ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಮುಖ್ಯೋಪಾಧ್ಯಾಯರ ಮುಖಾಂತರ ಅಕ್ಟೋಬರ್ ಎರಡನೇ ತಾರೀಕಿನ ಸಂಜೆಯ ಒಳಗಾಗಿ ಈ ಕೆಳಗೆ ನಮೂದಿಸಿದ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 7259003867 , 9611562468

Leave a Reply

Your email address will not be published. Required fields are marked *