ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಪಡೀಲ್ ಬೈಲ್ ಅಂಗನವಾಡಿ ಕೇಂದ್ರದಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಿತು.ಧ್ವಜಾರೋಹಣವನ್ನು ಹಿರಿಯನಾಗರಿಕರಾದ 93ನೇ ವಯಸ್ಸಿನ ಪ್ರಗತಿಪರ ಕೃಷಿಕರಾದ ಮಹಾಬಲ ಆಳ್ವ ನೇರವೇರಿಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಯಾದ ಶ್ರವಣ್ ರವರು ಪ್ರಾರ್ಥನೆ ಮಾಡಿದರು. ಮಹಾಬಲ ಶೆಟ್ಟಿ ಯವರು ದೀಪ ಬೆಳಗಿಸಿ ಮಕ್ಕಳಿಗೆ ಆಶೀರ್ವಾದಿಸಿದರು. ಸಂದೀಪ್ ಕಮ್ಮಾಜೆ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಬಗ್ಗೆ ತಿಳಿಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋ.ರಿ. ಬಂಟ್ವಾಳದ ಧನೂಪೂಜೆ ಒಕ್ಕೂಟದ ಸೇವಾಪ್ರತಿನಿಧಿ ಅಮಿತಾ.ಬಿಯವರು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯವರ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮಹಾಬಲ ಶೆಟ್ಟಿಯವರಿಗೆ ಅಂಗನವಾಡಿ ಯಿಂದ ಗೌರವ ಅರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಹಿರಿಯ ನಾಗರಿಕರಾದ ಮೈಯದಿ, ಅಂಗನವಾಡಿ ಯ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶೋಭಾ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಕ್ಕಳಪೋಷಕರು, ಧನೂಪೂಜೆ ಶೌರ್ಯ ಘಟಕದ ಪ್ರತಿನಿಧಿ ಜಗದೀಶ್ ಆಚಾರ್ಯ, ಮತ್ತು ಘಟಕದ ಸದಸ್ಯರು, ಶಿವಾಜಿ ಗೆಳೆಯರ ಬಳಗ ರಿ. ಅಧ್ಯಕ್ಷರಾದ ಗಣೇಶ್ ಸಾಣಕಟ್ಟರವರು, ಗ್ರಾಮಸ್ಥರು , ಅಂಗನವಾಡಿ ಕಾರ್ಯಕರ್ತೆ ಸುಕನ್ಯಾ ಮತ್ತು ಸಹಾಯಕಿ ರೇಖಾ ಭಾಗವಹಿಸಿದರು..ಹಳೆ ವಿದ್ಯಾರ್ಥಿಯಾದ ಪ್ರಥಮ್ ರವರು ನಿರೂಪಿಸಿದರು.ಪ್ರಭಾಕರ್ ಕಾಗುಡ್ಡೆ ಸ್ವಾಗತಿಸಿದರು. ಧನ್ಯವಾದದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿದೆ.



