Breaking
12 May 2026, Tue

ಕಂದೂರು ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಬಂಟ್ವಾಳ: ಶ್ರೀ ಕೃಷ್ಣ ಶಿಶು ಮಂದಿರ ಕಂದೂರು ಸಜೀಪ ಮೂಡದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ವಿಜೃಂಭನೆಯಿಂದ ಆಚರಿಸಲಾಯಿತು.

ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಶ್ರೀಕೃಷ್ಣ ಭಗವಂತ ಭಗವದ್ಗೀತೆಯ ಮೂಲಕ ಜಗತ್ತಿಗೆ ನೀಡಿದ ಸಂದೇಶ ಪಾಲಿಸುವುದರ ಮೂಲಕ ಕೃಷ್ಣ ತತ್ವವನ್ನು ಅನುಷ್ಠಾನ ಮಾಡುವುದರ ಮೂಲಕ ಸಂಸಾರಿಕ ಗೊಂದಲಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದರು.

ಹಬ್ಬದ ಅಂಗವಾಗಿ ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷಗಳನ್ನು ತೊಡಿಸಿ ಮಡಿಕೆ ಹೊಡೆದು ಸಂಭ್ರಮಿಸಿದರು. ಜೊತೆಗೆ ಪುಟಾಣಿಗಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿ ತಾಯ ಸುಬ್ರಾ̧̧̧ಯ, ಕಾರಂತ ಕೆ ಲಕ್ಷ್ಮೀನಾರಾಯಣ ಭಟ್, ಪದ್ಯಾಣ ಯಶವಂತ ದೇರಾಜೆಗುತ್ತು, ಸುರೇಶ್ ಐತಾಳ, ಬಿ ವಿಜಯಲಕ್ಷ್ಮಿ ಮಯ್ಯ, ಜಗದೀಶ ಐತಾಳ್, ಸೋಮನಾಥ, ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *