ಬಂಟ್ವಾಳ ವಲಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವಾರ್ಷಿಕ ಸಭೆ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವಾರ್ಷಿಕ ಸಭೆಯು ಬಿ.ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಲಯದ ಅಧ್ಯಕ್ಷರಾದ ಕಿಶೋರ್ ಎಸ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. 2023-2024ನೇ ಗತವರ್ಷದ ವರದಿಯನ್ನು ಮೋಹನ್ ಏಕದಂತ ವಾಚಿಸಿದರು, ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ ವರದಿಯನ್ನು ವಾಚಿಸಿದರು, ಕೋಶಾಧಿಕಾರಿ ವರುಣ್ ಕಲ್ಲಡ್ಕ 24-25 ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು.

ವಲಯದ ಅಧ್ಯಕ್ಷರು ಕಿಶೋರ್ ಕುಮಾರ್ ಮಾತನಾಡಿ ವಲಯವು ರಜತ ಸಂಭ್ರಮವನ್ನು ಆಚರಿಸುತಿದ್ದು, ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಅಂಚೆ ಜೀವವಿಮೆಯನ್ನು ಮಾಡಿಸಿದ್ದು, ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯತ್ವನ್ನು ನವೀಕರಿಸಿದ ಸದಸ್ಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸಂಘದಿಂದ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ನವೀನ ರೈ , ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಏನ್, ಜಿಲ್ಲಾ ಸಂಚಾಲಕರಾದ ಕರುಣಾಕರ ಕಾಣಂಗಿ, ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಹರೀಶ್ ರಾವ್, ವಲಯದ ಗೌರವಾಧ್ಯಕ್ಷರಾದ ಹರೀಶ್ ಕುಂದರ್ ಉಪಸ್ಥಿತರಿದ್ದರು. ಯೋಗೀಶ್ ಮೊಗರ್ನಾಡು, ವಂದಿಸಿದರು, ರಾಜೇಂದ್ರ ಹಾಗೂ ರೋಷನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *