Breaking
30 Jun 2026, Tue

ಸ್ವಾತಂತ್ರೋತ್ಸವದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಬಂಟ್ವಾಳ: ಸ್ವಾತಂತ್ರೋತ್ಸವದ ಅಂಗವಾಗಿ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವು ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ವತಿಯಿಂದ ನಡೆಸಲಾಯಿತು.

ಎಸ್.ಸಿ.ಐ ಅಧ್ಯಕ್ಷ ಟಿ. ತಾರನಾಥ ಕೊಟ್ಟಾರಿ ನೇತೃತ್ವದಲ್ಲಿ ವಕೀಲ ರವೀಂದ್ರ ಕುಕ್ಕಾಜೆ ಅವರ ಸಂಯೋಜಕತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು.

ಬಂಟ್ವಾಳ ನಗರ ಠಾಣೆ ಸಬ್‌ಇನ್ಸ್ಪೆಕ್ಟರ್ ಸಂದೀಪ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉಪನ್ಯಾಸಕ ಜಯಾನಂದ ಪೆರಾಜೆ ,ಎಸ್.ಸಿ.ಐ ಪದಾಧಿಕಾರಿಗಳಾದ ಶೈಲಜಾ ರಾಜೇಶ್, ಸನ್ಮತಿ ಜೈನ್, ರೇಖಾ ರಾವ್, ಜಯ ಗಣೇಶ ಮೊದಲಾದವರು ಪಾಲ್ಗೊಂಡಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸ್ವಾಗತಿಸಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *