ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ 109ನೇ ವರ್ಷದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯ ಪ್ರಯುಕ್ತ ಸೇವಾರ್ಥವಾಗಿ ಟೀಮ್ ಬೆದ್ರದ ಪಿಲಿ ಸಾರಾಥ್ಯದಲ್ಲಿ ಪಿಲಿ ಏಸ ಹಾಗೂ ಕುಣಿತ ಭಜನಾ ಮೆರವಣಿಗೆಯು ಆ. 16 ರ ಶನಿವಾರದಂದು ನಡೆಯಲಿದೆ.

ಭಕ್ತಿಭಾವದ ಕುಣಿತ ಭಜನೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಕಡಂದಲೆ ಪಾಲಡ್ಕ, ಶ್ರೀ ಗಜಾನನ ಭಜನಾ ಮಂಡಳಿ ಒಂಟಿಕಟ್ಟೆ ಹಾಗೂ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ಅಂಬೂರಿ ಬೆಳುವಾಯಿ ಭಜನಾ ತಂಡಗಳು ಭಾಗವಹಿಸಲಿದೆ.

ಶುಕ್ರವಾರದಂದು ಶ್ರೀ ಕೃಷ್ಣ ದೇವರ ಮಹಾ ಮಂಗಳಾರತಿಯು ನಡೆಯಲಿದ್ದು ನಂತರ ರಾತ್ರಿ 8:30ಕ್ಕೆ ಊದು ಪೂಜೆ ನಡೆಯಲಿದೆ. ಶನಿವಾರ ಬೆಳಿಗ್ಗೆ 9:30ಕ್ಕೆ ಸರಿಯಾಗಿ ಹುಲಿವೇಷದ ಮೆರವಣಿಗೆ ನಡಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



