Breaking
12 May 2026, Tue

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳಿಗೆ ವಿಷಪೂರಿತ ಮಾಂಸ ಬೆರೆಸಿ ಕೊಲ್ಲಲು ಯತ್ನ!?

ಮಂಗಳೂರು: ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸವನ್ನು ಬೆರೆಸಿ ಕೊಲ್ಲುವ ಹುನ್ನಾರ ನಡೆದಿದೆ ಅನ್ನುವ ಆರೋಪ ಕೇಳಿ ಬಂದಿದೆ.

ಈ ಕುರಿತು ನಿರ್ದೇಶಕ ಡಾ| ಪ್ರಶಾಂತ್ ಪೈ ಅವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಹೊಸ ಗುತ್ತಿಗೆದಾರರೊಬ್ಬರು ಮಾಂಸ ಪೂರೈಕೆಯ ಗುತ್ತಿಗೆ ಪಡೆದುಕೊಂಡಿದ್ದು ಅವರು ಪೂರೈಸುತ್ತಿರುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸ ಬೆರೆಸಿ, ಟೆಂಡರುದಾರರ ಮಾಂಸವನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಹಿಂದಿನ ಟೆಂಡರುದಾರ ನೌಕರನೊಬ್ಬ ಆ.7ರಂದು ಉದ್ಯಾನವನದ ಸಿಬಂದಿಗೆ ಕರೆ ಮಾಡಿ ತಿಳಿಸಿದ್ದಾನೆ ಎನ್ನಲಾಗಿದೆ.

ಆ ಮೂಲಕ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಹುನ್ನಾರ ನಡೆಸಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *