ಬೆಂಗಳೂರು: ಅತಿ ಸುರಕ್ಷಿತ ನೋಂದಣಿ ಫಲಕ (HSRP)ಅಳವಡಿಕೆಗೆ ನ.20 ರವರೆಗೆ ಅವಧಿ ವಿಸ್ತರಣೆಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದು ಈ ವರೆಗೆ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಹಿಂದೆ ನೀಡಿದ್ದ ಕಾಲಾವಕಾಶ ಈ ವಾರಕ್ಕೆ ಅಂತ್ಯಗೊಂಡಿದ್ದು, ಕೋರ್ಟ್ ನ ಈ ಆದೇಶದಿಂದ ದಂಡದ ಚಿಂತೆಯಲ್ಲಿದ್ದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿಕೆ ಮಾಡಿದೆ.
ನವೆಂಬರ್ 20 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸದ್ಯಕ್ಕೆ ದಂಡದ ಟೆನ್ಷನ್ ತಪ್ಪಿದೆ.