ಹಿರಿಯಡ್ಕ : ಮಗಳ ಸಾವಿನಿಂದ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಎಂಬಲ್ಲಿ ನಡೆದಿದೆ.
ಮೃತರನ್ನು ಪೆರ್ಡೂರು ಗ್ರಾಮದ ಲತಾ(52) ಎಂದು ಗುರುತಿಸಲಾಗಿದೆ.

ಮೃತರ ಪತಿ ಸುಮಾರು 20 ವರ್ಷದ ಹಿಂದೆ ಹೃದಯಾಘಾತವಾಗಿ ಮೃತ ಪಟ್ಟಿದ್ದು, 3 ತಿಂಗಳ ಹಿಂದೆ ತನ್ನ ಒಬ್ಬಳೇ ಮಗಳು ಮೆದುಳಿನ ಆಘಾತದಿಂದ ಕೊನೆಯುಸಿರೆಳೆದ್ದಿದ್ದರು. ಇದೇ ಚಿಂತೆಯಲ್ಲಿ ಮನನೊಂದ ಅವರು ಮನೆಯಲ್ಲಿ ಮಲಗುವ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

