Breaking
25 Nov 2026, Wed

ಶ್ರೀ ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನ: ತುಂಬೆ ವಲಯದಿಂದ ಗೋಪೂಜೆ, ಮೇವು ವಿತರಣೆ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತುಂಬೆ ವಲಯದ ವತಿಯಿಂದ ವಿಶೇಷ ಸೇವಾ ಕಾರ್ಯಕ್ರಮ ನಡೆಯಿತು.


ಬಂಟ್ವಾಳ ತಾಲೂಕಿನ ನೆತ್ತರಕೆರೆ ಗ್ರಾಮದ ಶ್ರಾವ್ಯ ಗೋಕುಲ ಗೋ ಮಂದಿರದಲ್ಲಿ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಮೇವು ಹಾಗೂ ಹಸಿರು ಹುಲ್ಲು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು, ನವಜೀವನ ಸಮಿತಿ ಸದಸ್ಯರು ಹಾಗೂ ವೀರೇಂದ್ರ ಹೆಗ್ಗಡೆ ಅಭಿಮಾನಿಗಳ ಬಳಗದ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯ ಭಾಸ್ಕರ್ ಚೌಟ, ಗೋಶಾಲೆಯ ಪ್ರಮುಖರಾದ ನಾರಾಯಣ ಹೊಳ್ಳ, ಐತಪ್ಪ ಅಳ್ವ ಸುಜೀರ್ ಗುತ್ತು, ಪದ್ಮನಾಭ ಗೋವಿನ ತೋಟ, ಯೋಜನೆಯ ತಾಲೂಕು ಯೋಜನಾಧಿಕಾರಿ ಜಯನಂದ ಪಿ., ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಒಕ್ಕೂಟಗಳ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *