Breaking
7 Oct 2026, Wed

ಕೃಷಿ ವಿಜ್ಞಾನದಲ್ಲಿ 53ನೇ ರ‍್ಯಾಂಕ್: ನಿಧಿತಾ ಬಂಗೇರ ಅವರಿಗೆ ಸನ್ಮಾನ

ಗುರುವಾಯನಕೆರೆ: ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000 ವಿದ್ಯಾರ್ಥಿಗಳ ಪೈಕಿ 53ನೇ ರ‍್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಕುಮಾರಿ ನಿಧಿತಾ ಬಂಗೇರ ಅವರನ್ನು ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಆನಂದ ಹಾಗೂ ಪ್ರತಿಮಾ ದಂಪತಿಯ ಪುತ್ರಿಯಾದ ನಿಧಿತಾ ಅವರ ನಿವಾಸದಲ್ಲಿ ಅ.6ರಂದು ನಡೆದ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಜೀವನ್ ಕುಲಾಲ್, ರಿಜೇಶ್ ಕುಮಾರ್ ಗುರುವಾಯನಕೆರೆ, ಗಣೇಶ್ ಕುಲಾಲ್, ರವಿ ಸಪಲ್ಯ ಅಮರ್ ಜಾಲ್, ರವೀಂದ್ರ ಶೆಟ್ಟಿ ಪನೆಜಾಲ್, ಪ್ರದೀಪ್ ಶೆಟ್ಟಿ ಶಕ್ತಿನಗರ, ರಂಜಿತ್ ಮದ್ದಡ್ಕ, ಪ್ರೇಮ್ ಶೆಟ್ಟಿ ಗುಂಪಲಾಜೆ, ಗುರುಪ್ರಸಾದ್ ಶೇಷಗಿರಿ, ಪ್ರಶಾಂತ್ ಕುಲಾಲ್, ಶ್ರೀರಾಜ್ ಶೆಟ್ಟಿ ಶಕ್ತಿನಗರ, ಸಚಿನ್ ಶೆಟ್ಟಿ ಪಡ್ಯಾರ್, ಮುಕೇಶ್ ಕುಲಾಲ್, ಅರುಣ್ ಅಮರ್ ಜಾಲ್, ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *