Breaking
7 Oct 2026, Wed

ಬಂಟ್ವಾಳದಲ್ಲಿ ಕುಲಾಲ ಕುಂಬಾರರ ಯುವ ವೇದಿಕೆಯ ‘ಮರಿಯಲದ ನೆಂಪು ಎಸಲ್-5’ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ‘ಮರಿಯಲದ ನೆಂಪು ಎಸಲ್-5’ ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರದಲ್ಲಿ ಅ.04 ರಂದು ನಡೆಯಿತು.

ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಶೀನ ಮೂಲ್ಯ ಅಲ್ಲಿಪಾದೆ ಉದ್ಘಾಟಿಸಿದರು. ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಯುವ ಪಡೆಯನ್ನು ಸಂಘಟಿಸುವ ಉದ್ದೇಶದಿಂದ ಯುವ ವೇದಿಕೆಯನ್ನು 20 ವರ್ಷಗಳ ಹಿಂದೆಯೇ ಸ್ಥಾಪಿಸಲಾಗಿತ್ತು. ಅಂದು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದು ಫಲ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಬಂಟ್ವಾಳದಲ್ಲಿ ಯುವ ವೇದಿಕೆಯ ಬಲಿಷ್ಠ ಪಡೆ ಇದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳದಲ್ಲಿ ಯುವ ವೇದಿಕೆಯ ಕಾರ್ಯಾಲಯ ಸ್ಥಾಪನೆಯಾಗಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಮೂಡಿಗೆರೆ, ಹಾಸನದ ಉದ್ಯಮಿ ತಿಮ್ಮಪ್ಪ ಕುಂಬಾರ್ ಶೆಟ್ಟಿ, ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರಾದ ಚೆನ್ನಪ್ಪ ಕುಲಾಲ್ ಮಾಣಿ, ಬಂಟ್ವಾಳ ಕುಲಾಲ ಸಂಘದ ಗೌರವಾಧ್ಯಕ್ಷ ಮಚ್ಚೇಂದ್ರ ಸಾಲಿಯಾನ್, ಪಾದುವಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ರೇಷ್ಮಾ ವಿನಯ್ ಕಡೆಗೋಲಿ, ಚಲನಚಿತ್ರ ನಟಿ ಜ್ಯೋತಿ ಕುಲಾಲ್ ಪುತ್ತೂರು, ಸಿವಿಲ್ ಇಂಜಿನಿಯರ್ ನಾಗೇಶ್ ಕುಲಾಲ್ ನರಿಕೊಂಬು, ಬಂಟ್ವಾಳ ಕುಲಾಲ ಹಿರಿಯ ನಾಗರಿಕರ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಸಾಲ್ಯಾನ್ ಸೊರ್ನಾಡು, ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭೋಜ ಸಾಲ್ಯಾನ್, ಯುವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕಿ ಭಾರತಿ ಶೇಷಪ್ಪ, ಜಿಲ್ಲಾಧ್ಯಕ್ಷ ಅನಿಲ್ ದಾಸ್, ಯುವ ವೇದಿಕೆಯ ಉಪಾಧ್ಯಕ್ಷ ರಾಮಚಂದ್ರ ದೈಪಳ, ಮಹಿಳಾ ಸಂಚಾಲಕಿ ದುರ್ಗಾಶ್ರೀ ಪ್ರದೀಪ್, ಕಾರ್ಯದರ್ಶಿ ಕಿಶೋರ್ ಬಂಗೇರ ಏರ್ಯ ಹಾಗೂ ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು ಉಪಸ್ಥಿತರಿದ್ದರು.

ಸುಕುಮಾರ್ ಬಂಟ್ವಾಳ ಪ್ರಸ್ತಾವನೆ ಮೂಲಕ ಸ್ವಾಗತಿಸಿದರು. ಹೆಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಮರ್ತಾಜೆ ವಂದಿಸಿದರು.

Leave a Reply

Your email address will not be published. Required fields are marked *