ಪುಂಜಾಲಕಟ್ಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕು ಇದರ ಪುಂಜಾಲಕಟ್ಟೆ ವಲಯದ ಕಾವಳ ಮುಡೂರು, ಕಾವಳಕಟ್ಟೆ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆದ್ದಳಿಕೆಯಲ್ಲಿ ಅಕ್ಟೋಬರ್ 4 ಆದಿತ್ಯವಾರ ಜರಗಿತು.

ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮದ ನಂತರ ನಡೆದ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ಕಾವಳ ಮುಡೂರು ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣಪತಿ ಮುಚ್ಚಿನ್ನಾಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಜಯಾನಂದ್ ಪಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಜಿತ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರೋಷನ್ ಶೆಟ್ಟಿ, ವೈಭವ್ ಹಾರ್ಡ್ ವೇರ್ ಸೀತಾರಾಮ್ ಶೆಟ್ಟಿ, ಪ್ರಗತಿ ಪರ ಕೃಷಿಕ ಸತೀಶ್ ಪೂಜಾರಿ, ಯಶೋಧರ ಅಂಚನ್, ಪ್ರವೀಣ್ ಪೂಜಾರಿ, ಮೋಹನ್ ಆಚಾರ್ಯ, ಜಗನ್ನಾಥ ಶೆಟ್ಟಿ,ಬಾಲಗೋಕುಲದ ಅಧ್ಯಕ್ಷ ಕೂಸಪ್ಪ ಶೆಟ್ಟಿ ಉಪಸ್ಥಿತರಿದ್ದರು.

ಸ್ವಸಹಾಯ ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆ ನಡೆಸಿದ್ದು ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಯೋಜನೆಯ ಪಲಾನುಭವಿ ಮಕ್ಕಳ ವೃತ್ತಿಪರ ಶಿಕ್ಷಣ, ಪ್ಯಾರ ಮೆಡಿಕಲ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರವಿತರಣೆ ಮಾಡಲಾಯಿತು.

ವಲಯ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿ,ಸೇವಾಪ್ರತಿನಿಧಿ ಕುಸುಮ ಸಾಧನಾ ವರದಿ ವಾಚಿಸಿದರು. ಕಾರ್ಯದರ್ಶಿ ಸೌಮ್ಯ ವಂದಿಸಿದರು. ಅಕ್ಷಯ್ ಕಾವಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿಗಳಾದ ಗೋವಿಂದ, ಸುಧಾ, ಅಮೃತ, ಶೇಖರ್ ಸಹಕರಿಸಿದರು.



