Breaking
5 Oct 2026, Mon

ವೈಸಿಎಸ್ ಕೆಲರಾಯ್ ಇವರ ನೇತ್ರತ್ವದಲ್ಲಿ ಬೈಬಲ್ ಸಂತರ, ಮಾತೆ ಮರಿಯಮ್ಮನವರ ಫ್ಯಾನ್ಸಿ ಡ್ರೆಸ್ಸ್ ಸ್ಪರ್ಧೆ

ವೈಸಿಎಸ್ ಕೆಲರಾಯ್ ಇವರ ನೇತ್ರತ್ವದಲ್ಲಿ ಬೈಬಲ್ ಸಂತರ, ಮಾತೆ ಮರಿಯಮ್ಮನವರ ಫ್ಯಾನ್ಸಿ ಡ್ರೆಸ್ಸ್ ಸ್ಪರ್ಧೆ ಅಕ್ಟೋಬರ್ 4ರ ಭಾನುವಾರ ಬೆಳಿಗ್ಗೆ 8.15 ರಿಂದ 9.15ರ ವರೆಗೆ ಕೆಲರೈ ಚರ್ಚಿನ ಸಭಾಂಗಣದಲ್ಲಿ ನಡೆಯಿತು.

ವಿವಿಧ ಸಂತರ ಹಾಗೂ ಮಾತೆ ಮರಿಯಮ್ಮನವರ ವೇಷ ಧಾರಣೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರಲ್ಲಿ 40 ಮಕ್ಕಳು ಭಾಗವಹಿಸಿ ತಮ್ಮ ವೇಷಭೂಷಣಗಳಿಂದ ಎಲ್ಲರನ್ನೂ ಮಂತ್ರಮುಗ್ದರಾಗಿಸಿದರು.

ಕೆಲರೈ ಚರ್ಚಿನ ಗುರುಗಳಾದ ವಂದನೀಯ ಸಿಲ್ವೆಸ್ಟರ್ ಡಿಕೋಸ್ಟಾರವರ ಮಾರ್ಗದರ್ಶನದಲ್ಲಿ, ಸುವಾರ್ತೆ ಪ್ರಚಾರಕ ಸಮಿತಿಯ ಹಾಗೂ ವೈಸಿಎಸ್ ಕೆಲರೈ ಘಟಕದ ಸಹಭಾಗಿತ್ವದಲ್ಲಿ ಈ ಸ್ಪರ್ಧೆ ನಡೆಯಿತು.

ವಂದನೀಯ ಫಾದರ್ ಜೋವಿನ್ ವಿಶ್ವಾಸ್ ಸಿಕ್ವೇರಾ ಹಾಗೂ ವಂದನೀಯ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ ಇವರು ತೀರ್ಪುದಾರರಾಗಿ ಸ್ಪರ್ಧೆಯ ಫಲಿತಾಂಶ ನೀಡಿದರು.

ಚರ್ಚ್ ಪಾಲನಾ ಸಮಿತಿಯ ಉಪಾದ್ಯಕ್ಷರಾದ ವೀಣಾ ಪಿಂಟೊ, ಕಾರ್ಯದರ್ಶಿ ಹೆರಾಲ್ಡ್ ಮೊಂತೇರೊ, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಐರಿನ್ ರೊಡ್ರಿಗಸ್, ಆಯೋಗಗಳ ಸಂಯೋಜಕಿ ಲಿಲ್ಲಿ ಚಂದ್ರನ್ ಉಪಸ್ಥಿತರಿದ್ದರು.

ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾರವರು ಬೈಬಲ್ ಫ್ಯಾನ್ಸಿ ಡ್ರೆಸ್ಸಿನ ಕುರಿತು ಪ್ರಾಸ್ತವಿಕ ಭಾಷಣ ನೀಡಿ ಎಲ್ಲಾ ಸ್ಪರ್ಧಿಕರಿಗೆ ಶುಭ ಹಾರೈಸಿದರು. ವೈಸಿಎಸ್ ಸಚೇತಕರಾದ ಗೊಡ್ವಿನ್ ವಾಸ್ ಸ್ವಾಗತಿಸಿದರು. ವೈಸಿಎಸ್ ಅಧ್ಯಕ್ಷ ಸೋಹನ್ ಜೋಶ್ವಾ ಗಣ್ಯರಿಗೆ ಹೂಗುಚ್ಚ ನೀಡಿದರು.

ರಯೋಲಾ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಅಶಲ್ ರಿಯೋನಾ ಹಾಗೂ ಸಿಯೋನ್ ಮೋನಿಸ್ ಸ್ಪರ್ಧೆ ನಿರ್ವಹಿಸಿದರು. ವೈಸಿಎಸ್ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

ಪ್ರಿನ್ಸಿಟಾ ಡಿಮೆಲ್ಲೊ ವಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಸಂತರ ಉಡುಪು ಹಾಕಿಯೇ ಪವಿತ್ರ ಬಲಿಪೂಜೆಗೆ ಹಾಜರಾದರು.

Leave a Reply

Your email address will not be published. Required fields are marked *