ಬಂಟ್ವಾಳ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕುದುಮಾನು ತಿಮ್ಮಪ್ಪ ಹಾಗೂ ಯಶೋಧಾ ದಂಪತಿಯ ಪುತ್ರಿ ಯಶಸ್ವಿ ಕೆ. ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ 10ನೇ ಏಷ್ಯನ್ ಪೆಸಿಫಿಕ್ ಡೆಫ್ ಚೆಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಮಂಗಳೂರು ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ಎಂ.ಸಿ.ಎ,.ವ್ಯಾಸಂಗ ಮಾಡುತ್ತಿರುವ ಈಕೆ ಬಾಲ್ಯದಿಂದಲೇ ಚೆಸ್ ಕೂಟಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.