Breaking
20 Sep 2026, Sun

ಉಳ್ಳಾಲದ ಪಾನೀರ್ ನಲ್ಲಿ ಕಥೋಲಿಕ್ ಸಭಾದಿಂದ ಶಿಕ್ಷಕರಿಗೆ ಗೌರವಾರ್ಪಣೆ

ಮಂಗಳೂರು: ಹೊರವಲಯದ ಉಳ್ಳಾಲದ ಪಾನೀರ್ ದಯಾಮಾತೆ ದೇವಾಲಯ ಮತ್ತು ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಪಾನೀರ್ ಘಟಕದ ಆಶ್ರಯದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಚರ್ಚ್ ನ ಧರ್ಮಗುರು ಫಾದರ್ ವಿಕ್ಟರ್ ಡಿಮೆಲ್ಲೋ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಹಿಂದೆ ಯಾವುದೇ ಶುಲ್ಕ ಪಡೆಯದೆ ಜನರನ್ನು ಸುಶಿಕ್ಷಿತಗೊಳಿಸಲು ಶಿಕ್ಷಕರು ಜೀವನ ಮುಡಿಪಾಗಿಟ್ಟಿದ್ದರು. ಪಾನೀರ್ ಚರ್ಚ್ ವ್ಯಾಪ್ತಿಯಲ್ಲಿ ಅತ್ಯಧಿಕ ಶಿಕ್ಷಕರು ಇರುವುದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭ 65 ಶಿಕ್ಷಕರನ್ನು ಗೌರವಿಸಲಾಯಿತು.

ಈ ಸಂದರ್ಭ ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, 21 ಆಯೋಗದ ಸಂಯೋಜಕ ರೋನಾಲ್ದ್ ಡಿಸೋಜ, ಆಸಿಸಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಶಾಂತಿ ವಿಲ್ಮಾ ಅಲ್ಮೇಡ, ಪ್ರದೇಶ ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಡಿಸೋಜ, ಕಾರ್ಯಕ್ರಮ ಪ್ರಯೋಜಕರು ರೆಮ್ಮಿ ಲೋಬೋ, ಅಶ್ವಿನ್ ಮೊಂತೆರೋ, ಕಾರ್ಯಕ್ರಮ ಸಂಚಾಲಕರಾ ಫೆಲಿಕ್ಸ್ ಡಿಸೋಜ , ಕಥೊಲಿಕ್ ಸಭಾ ಘಟಕಧ್ಯಕ್ಷ ಐವನ್ ಮೊಂತೆರೋ . ವೈಲೆಟ್ ಡಿಸೋಜ, ರೇಷ್ಮಾ ಸಂತನೆಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *