ಕಟಪಾಡಿ: ವ್ಯಕ್ತಿಯೋರ್ವರ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸಿಎಸ್‌ಐ ಚರ್ಚ್ ಬಳಿ ಸೆ.09ರಂದು ನಡೆದಿದೆ.
ಜೇಕಬ್ ಸಿಕ್ವೇರ ಅವರ ತೋಟದ ಬಾವಿಯಲ್ಲಿ ಈ ಚಿರತೆ ಕಂಡುಬಂದಿದೆ.

ಇವರ ತೋಟದ ಬಾವಿಯ ನೀರಿನ ಪಂಪ್ ಚಾಲೂ ಆಗದ ಸ್ಥಿತಿಯಲ್ಲಿತ್ತು. ಅದನ್ನು ಪರಿಶೀಲಿಸಲು ಬಂದಾಗ ಚಿರತೆಯೊಂದು ಬಾವಿಯಲ್ಲಿರುವುದನ್ನು ಗಮನಿಸಿದ್ದಾರೆ.
ಸುಮಾರು 2ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆಯು ಸ್ಥಳೀಯರ ಸಹಕಾರದೊಂದಿಗೆ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆ ಮರಿಯನ್ನು ಸುರಕ್ಷಿತವಾಗಿ ಹಿಡಿದು ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.




