ಕಾಸರಗೋಡುವಿನಲ್ಲಿ ಬೈಕ್ ಮಗುಚಿ ಬಿದ್ದು ಯುವಕ ಸಾವು

ಕಾಸರಗೋಡು: ಬೈಕ್ ಮಗುಚಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಕಾಸರಗೋಡುವಿನ ಇರಿಯಣ್ಣಿ ಮಂಜಕಲ್ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಜಿತೇಶ್(27) ಎಂದು ಗುರುತಿಸಲಾಗಿದೆ.

ಮಧ್ಯಾಹ್ನದ ವೇಳೆ ಕಾನತ್ತೂರು ಕಡೆಯಿಂದ ಇರಿಯಣ್ಣಿ ಕಡೆಗೆ ಬರುತ್ತಿದ್ದ ಜತೇಶ್ ನ ಬೈಕ್ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣದ ಕಂಬಕ್ಕೆ ಬಡಿದು ಮಗುಚಿ ಈ ದುರ್ಘಟನೆ ಸಂಭವಿಸಿದೆ.

ಜಿತೇಶ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿದ್ದು, ಓಣಂ ಹಬ್ಬದ ರಜೆಯ ಅಂಗವಾಗಿ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *