ಮೂಡಬಿದ್ರೆ: ಬೆಳುವಾಯಿ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಮೂಡಬಿದ್ರೆ ತಾಲೂಕಿನ ದರೆಗುಡ್ಡೆ ಹಿತ್ತಿಲುಮನೆ ನಿವಾಸಿ ಚಂದ್ರನಿಲಯ ಅಮರಾಜ ಹೆಗ್ಡೆ(70ವ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.

ಮೂಡುಮಾರ್ನಾಡು ನಲ್ಲಿ ಹಲವು ವರ್ಷಗಳಿಂದ ಅಕ್ಕಿ ಮಿಲ್ ನಡೆಸುತ್ತಿದ್ದ ಅಮರಾಜ ಹೆಗ್ಡೆ ಅವರು ಕೃಷಿಕರಾಗಿದ್ದರು.
ಮೃತರು ಪತ್ನಿ , ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.




