ಉಡುಪಿ: ಕೊರಂಗ್ರಪಾಡಿಯ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಬಳಿಯಿಂದ ನಾಪತ್ತೆಯಾಗಿದ್ದ ಬಾಲಕ ಮನೆಗೆ ವಾಪಾಸ್ಸಾಗಿದ್ದಾನೆ.

ನವೀನ್ ಚಂದ್ರ ಕಾಮತ್ ಅವರ ಪುತ್ರ ರತನ್ ಕಾಮತ್ (16) ಸೆ.05ರ ಸಂಜೆ ನಾಪತ್ತೆಯಾಗಿದ್ದು ಈ ಬಗ್ಗೆ ಆತನ ತಂದೆ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಸದ್ಯ ಬಾಲಕ ಮನೆಗೆ ಮರಳಿ ಬಂದಿದ್ದಾನೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.




