ಬಂಟ್ವಾಳ: 5 ತಿಂಗಳ ಹಿಂದೆ ಇರಾ ಗ್ರಾಮದ ಕಂಚಿನಡ್ಕಪದವಿನಲ್ಲಿ ಮೇಯಲು ಬಿಟ್ಟ ದನವನ್ನು ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂದಿಸಿ, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತ ಆರೋಪಿಯನ್ನು ಮೂಡುಪೆರಾರ ಗ್ರಾಮದ ಗಂಜಿಮಠ ಮುಂಡೇವು ಮನೆ ನಿವಾಸಿ ಇರ್ಷಾದ್(35) ಎಂದು ಗುರುತಿಸಲಾಗಿದೆ.
ಆರೋಪಿಯು ಹಲವು ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ದನ ಸಾಗಾಟ ಮಾಡಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ಕಂಚಿನಡ್ಕಪದವಿನಲ್ಲಿ ಮೇಯಲು ಬಿಟ್ಟ ದನವನ್ನು ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ.




