Breaking
19 Sep 2026, Sat

ಕರೋಪಾಡಿ ಗ್ರಾಮದ ಕಬ್ಬಿನ ಮೂಲೆಯ ನಾಗರಿಕರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ತಾಲೂಕಿನ ಕರೋಪಾಡಿ ಗ್ರಾಮದ ಕಬ್ಬಿನ ಮೂಲೆಯ ನಾಗರಿಕರ ವತಿಯಿಂದ ಅದ್ಧೂರಿಯಿಂದ ದೇಶದ 79ನೇ ಸ್ವಾತಂತ್ರ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.

ಜಾತಿ ಧರ್ಮ ವ್ಯತ್ಯಾಸ ಇಲ್ಲದೆ ನಾವೆಲ್ಲರೂ ಪರಸ್ಪರ ಸೌಹಾರ್ದತೆಯಿಂದ ಬಾಳೋಣ ಎಂಬ ಸಂದೇಶವನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಕರೋಪಾಡಿ ಸಮುದಾಯ ಆರೋಗ್ಯ ಅಧಿಕಾರಿ ಶರಭಯ್ಯ ನಾಗವಿಮಠ , ಮೆಸ್ಕಾಂ ಲೈನ್ ಮ್ಯಾನ್ ಶ್ರೀಕಾಂತ್ ಮಾಗಣಗೇರಿ, ಹಿರಿಯ ಪೋಸ್ಟ್ ಮ್ಯಾನ್ ಪೂವಪ್ಪ ಮೂಲ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ವರ್ ಕರೋಪಾಡಿ,ಗ್ರಾಮ ಪಂಚಾಯತ್ ಸದಸ್ಯ ಅಶ್ವತ್ ಮಂಟಮೆ ಮುಂತಾದವರಿಗೆ ಸನ್ಮಾನ ಮಾಡಲಾಯಿತು.

ಕೆಎಂ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರು ಕೆ ಎಂ ನಾಸಿರ್ ಸೌಹಾರ್ದ ಭಾಷಣ ಮಾಡಿ ಸ್ವಾಗತಿಸಿದರು ,ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಊರಿನ ಸರ್ವ ಧರ್ಮ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿ ಜೆ ಜೀವನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *