Breaking
20 Sep 2026, Sun

ಬಡಗಕಜೆಕಾರು ಗ್ರಾ.ಪಂ 79ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ:‌ ತಾಲೂಕು ಬಡಗಕಜೆಕಾರು ಗ್ರಾಮ ಪಂಚಾಯತಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ದೇವದಾಸ್ ಅಬುರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಹಮೀದ್ ಮಾಸ್ಟರ್ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು.

ಈ ಸಂದರ್ಭ ಸಿ.ಎ ಬ್ಯಾಂಕಿನ ಅಧ್ಯಕ್ಷರು ಸತೀಶ್ ಬಂಗೇರ, ಸಿ.ಎ ಬ್ಯಾಂಕಿನ ನಿರ್ದೇಶಕರುಗಳು ಸಿಬ್ಬಂದಿಗಳು, ಪ್ರಮುಖರಾದ ಮೋನಪ್ಪ ಕಾಂಡೆತ್ಯಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರುಗಳು ಪಾಂಡವರಕಲ್ಲು ಶಾಲಾ ಮಕ್ಕಳು ಶಿಕ್ಷಕರು ವಿವಿಧ ಇಲಾಖೆಯ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ವೆಂಕಟರಮಣ ಗೌಡ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *