ವಗ್ಗ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಲ್ಲಿ ಶ್ರಾವಣ ಮಾಸಾಂತ್ ಏಕ್ ದೀವಸ್ ಕಾರ್ಯಕ್ರಮ

ಬಂಟ್ವಾಳ: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ವಗ್ಗ ವಲಯದ ವತಿಯಿಂದ ಶ್ರಾವಣ ಮಾಸಾಂತ್ ಏಕ್ ದೀವಸ್ ಕಾರ್ಯಕ್ರಮವು ಆ.10 ರಂದು ವಗ್ಗ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ ಶ್ರೀ ಜಯರಾಮ ಭಟ್ ಮುಲ್ಕಾಜೆಮಾಡ, ಶ್ರಾವಣ ಮಾಸದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು. “ಶ್ರಾವಣವು ಭಕ್ತಿ, ತ್ಯಾಗ ಮತ್ತು ಒಗ್ಗಟ್ಟಿನ ಸಂಕೇತ. ಈ ಮಾಸದಲ್ಲಿ ನಾವೆಲ್ಲರೂ ಪ್ರಕೃತಿಗೆ, ದೇವತೆಗೆ ಹಾಗೂ ಸಮಾಜಕ್ಕೆ ಕೃತಜ್ಞತೆಯ ಮನಸ್ಸಿನಿಂದ ಬದುಕಬೇಕು” ಎಂದು ಅವರು ಹೇಳಿದರು.

ಅದೇ ರೀತಿ ಅತಿಥಿಗಳಾಗಿ ಭಾಗವಹಿಸಿದ ಡಾ. ತ್ರಿವೇಣಿ ಶೆಣೈ ಕೂಡಿಬೈಲು ಅವರು ಶ್ರಾವಣ ಮಾಸದಲ್ಲಿ ಸೇವಿಸಬೇಕಾದ ಗಿಡಮೂಲಿಕೆಗಳ, ಆಹಾರ ಪದಾರ್ಥಗಳ ಪೌಷ್ಟಿಕತೆ ಹಾಗೂ ಆರೋಗ್ಯಕಾರಿ ಔಷಧೀಯ ಗುಣಗಳ ಪ್ರಯೋಜನಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರೇರಣಾದಾಯಕವಾದ ಮಾತುಗಳನ್ನು ಹಂಚಿಕೊಂಡರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶ್ರೀನಿವಾಸ್ ಶೆಣೈ ಕೂಡಿಬೈಲು, ಕೃಷ್ಣಪ್ರಭು ಮುದಲಡ್ಕ, ಮೋಹನ್ ನಾಯಕ್ ಪುಂಜಾಲಕಟ್ಟೆ, ವಾಸುದೇವ್ ಪ್ರಭು ಕೋರ್ದೋಟ್ಟು ಮುಂತಾದ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಮತ್ತು ಚಿತ್ರಕಲಾ ಸ್ಪರ್ಧೆಗಳು ನಡೆಯಿತು. ಕುಮಾರಿ ಪ್ರಜ್ಞಾ ನಾಯಕ್ ನೆಲ್ಲಿಗುಡ್ಡೆ ಸಮರ್ಪಕವಾಗಿ ನಡೆಸಿಕೊಟ್ಟರು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ವರೆಗಿನ ಎಲ್ಲರೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಶ್ರಾವಣ ಮಾಸದ ಸಂಪ್ರದಾಯ, ಭಕ್ತಿ, ಸಮಾಜಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒಟ್ಟುಗೂಡಿಸಿದ ಈ ಕಾರ್ಯಕ್ರಮದಲ್ಲಿ ಊರಪರ ಊರಿನ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಡಿ.ರಮೇಶ ನಾಯಕ್ ಮೈರಾ ಶ್ರಾವಣ ಮಾಸವು ಪಂಚಾಂಗದಲ್ಲಿರುವ ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆಯೇ ಅತ್ಯಂತ ಪವಿತ್ರವಾದ ಶ್ರೇಷ್ಠ ಮಾಸ. ಕಷ್ಟದ ಆಷಾಢವನ್ನು ಮರೆತು ಪ್ರಕೃತಿಯ ಪೂಜೆ ನಾಗರ ಪಂಚಮಿಯಿಂದ ಪ್ರಾರಂಭಿಸಿ ವರಮಹಾಲಕ್ಷ್ಮಿ, ಸಮುದ್ರ ಪೂಜೆ, ಋಗೂಪಾಕರ್ಮ, ಕೃಷ್ಣ ಜನ್ಮಾಷ್ಟಮಿ ಮುಂತಾದ ಹಬ್ಬಗಳಿಂದ ಕೂಡಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಂದ ಕೂಡಿದ ಪುಣ್ಯಕಾಲ. ಮಳೆಯ ಸುಂದರ ಹಸಿರುಹೊದಿಕೆ ಯಲ್ಲಿರುವ ಈ ಕಾಲ ಪ್ರಕೃತಿ ಸುಂದರವಾಗಿ ಹಚ್ಚ ಹಸಿರಾಗಿ ತುಂಬಿ ತುಳುಕುತ್ತಿರುವ ಜಲಪಾತಗಳು ಸುಂದರವಾದ ವಾತಾವರಣ ಎಲ್ಲರೂ ಆರಾಮದಾಯಕವಾಗಿರುವಂತಹ ಸಂದರ್ಭವೇ ಶ್ರಾವಣ ಮಾಸ. ಇದು ನಮ್ಮ ಪರಂಪರೆಯಲ್ಲಿ ಬಂದಿರುವ ಸಂಪ್ರದಾಯಗಳ ಉಡುಗೆ ತೊಡುಗೆಗಳಿರಬಹುದು ಆಹಾರ ಪದ್ಧತಿ ಇರಬಹುದು ವಿಶೇಷ ಖಾದ್ಯಗಳಿರಬಹುದು ಎಲ್ಲವನ್ನು ತಯಾರಿಸುವ, ಸವಿಯುವ ಒಳ್ಳೆಯ ಸಮಯ . ತಾವು ತಯಾರಿಸಿದ ಖಾದ್ಯಗಳನ್ನು ಇನ್ನೊಬ್ಬರಿಗೆ ಸವಿಯಲು ನೀಡಿ ಅದರಲ್ಲಿ ಪಡುವ ತೃಪ್ತಿ ಆನಂದ ನಿಜವಾಗಿಯೂ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತದೆ ಎಂದು ನುಡಿಯುತ್ತಾ ಕಾರ್ಯಕ್ರಮ ಆಯೋಜಿಸಿದವರನ್ನು ಹಾಗೂ ಪಾಲ್ಗೊಂಡ ಎಲ್ಲರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶ್ರೀ ಪುರಂದರ ಪ್ರಭು ಪುಣೆ, ಡಾ.ವಿಜಯಲಕ್ಷ್ಮಿ ನಾಯಕ್, ಸುಚಿತ್ರ ನಾಯಕ್ ವಿಜಯ ಶೆಣೈ ಕೊಡಂಗೆ, ಕೃಷ್ಣ ಪ್ರಭು ಮುದಲಡ್ಕ, ಮೋಹನ್ ನಾಯಕ್ ಪುಂಜಾಲಕಟ್ಟೆ, ವಾಸುದೇವ್ ಪ್ರಭು ಕೋದೋ೯ಟ್ಟು, ಭಾಸ್ಕರ್ ಪ್ರಭು ಕೊರ್ದೊಟ್ಟು, ರವೀಂದ್ರ ನಾಯಕ್ ಶಕ್ತಿನಗರ, ದಿನೇಶ್ ನಾಯಕ್ ಕಾವಳಕಟ್ಟೆ, ರವೀಂದ್ರ ಶೆಣೈ ಕೂಡಿಬೈಲು, ಉಪೇಂದ್ರ ನಾಯಕ್ ಮೇರಿಹಿಲ್, ರಮೇಶ್ ಸಾಮಂತ್, ಮುಂತಾದವರು ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಮಕ್ಕಳ ಚಿತ್ರಕಲೆ ಸ್ಪರ್ಧೆಯನ್ನು ರಕ್ಷಾ ಪ್ರಭು ಓಮ, ಚೇತನ್ ಶೆಣೈ, ಇವರು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ರಾಮಕೃಷ್ಣ ಪ್ರಭು ಮಾರಿಬೆಟ್ಟು ಮನೋಜ್ಞವಾಗಿ ನಿರೂಪಿಸಿ, ಅಧ್ಯಕ್ಷರಾದ ಶ್ರೀ ಮುರಳಿಧರ ಪ್ರಭು ವಗ್ಗ ಆಗಮಿಸಿದ ಎಲ್ಲ ಅತಿಥಿಗಳು ಹಾಗೂ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮಹಿಳೆಯರು ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಪ್ರದರ್ಶನ ನಡೆಯಿತು. ಬಳಿಕ ಎಲ್ಲರೂ ಒಟ್ಟಾಗಿ ಸವಿದು, ಶ್ರಾವಣ ಮಾಸದ ಸವಿನೆನಪುಗಳನ್ನು ಹಂಚಿಕೊಂಡರು.

ಬೇರೆ ಬೇರೆ ಊರುಗಳಿಂದ ಸಮಾಜ ಬಾಂಧವರು ಆಗಮಿಸಿ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ವಿಶೇಷ ಚೈತನ್ಯ ತುಂಬಿತು. ಸಮಾಜದ ಒಗ್ಗಟ್ಟು, ಭಕ್ತಿ, ಸಂಸ್ಕೃತಿ ಹಾಗೂ ಸ್ನೇಹವನ್ನು ತೋರಿಸಿದ ಈ ಶ್ರಾವಣ ಮಾಸಾಂತ್ ಏಕ್ ದೀವಸ್ ಆಚರಣೆ ಎಲ್ಲರ ಮನದಲ್ಲಿ ನೆನಪಿನ ಶಾಶ್ವತ ಗುರುತು ಬಿಟ್ಟಿತು.

Leave a Reply

Your email address will not be published. Required fields are marked *