ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಥ ಪೂಜೆಯು ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ , ಪ್ರದೀಪ್ ಭಂಡಾರಿ, ಕಿಶನ್ ಸೇನವ, ಸುಭಾಷ್ ಶೆಟ್ಟಿ , ಸುಧಾಕರ ಕೆ.ಟಿ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ, ರಾಮ, ಸೋಮನಾಥ ಬಂಡಾರಿ, ಮನೋರಂಜನ್, ಹರೀಶ್ ಬಂಗೇರ, ಯಶವಂತ ದೇರಾ ಜೆ, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು.



