Breaking
15 Oct 2026, Thu

ಬಿ.ಸಿ.ರೋಡಿನಲ್ಲಿ ‘ಪಿಎಂ ಸೂರ್ಯ ಘರ್’ ಯೋಜನೆ ಜಾಗೃತಿ ಶಿಬಿರ ಆರಂಭ

ಬಂಟ್ವಾಳ: ಕೇಂದ್ರ ಸರಕಾರದ ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ಅಡಿಯಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ ‘ಸೇವಾ ಸೇತು ಅಭಿಯಾನ’ದ ವಿಶೇಷ ಜಾಗೃತಿ ಹಾಗೂ ನೆರವು ಶಿಬಿರ ಬುಧವಾರ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿ ಆವರಣದಲ್ಲಿ ಆರಂಭಗೊಂಡಿತು. ಶಿಬಿರ ಅಕ್ಟೋಬರ್ 16ರ ವರೆಗೆ ನಡೆಯಲಿದೆ.


ಶಿಬಿರದಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಸೌರ ವಿದ್ಯುತ್ ಅಳವಡಿಕೆ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು. ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ವಿಧಾನ, ಯೋಜನೆಯಡಿ ಸರಕಾರದಿಂದ ದೊರೆಯುವ ಆರ್ಥಿಕ ನೆರವು ಮತ್ತು ಸಬ್ಸಿಡಿ ಸೌಲಭ್ಯಗಳ ಬಗ್ಗೆ ಸೋಲಾರ್ ವಿದ್ಯುತ್ ಕಂಪನಿಗಳ ಪ್ರತಿನಿಧಿಗಳು ವಿವರಿಸಿದರು.


ಯೋಜನೆಗೆ ಆನ್ಲೈನ್ ಮೂಲಕ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ನೆರವು ನೀಡಲಾಗಿದ್ದು, ಸಾಲ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಒದಗಿಸಲಾಯಿತು.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹಾಗೂ ಆರ್ಇಸಿ ಸಂಸ್ಥೆಯ ಸಹಯೋಗದೊಂದಿಗೆ ಮೆಸ್ಕಾಂ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ತಿಳಿಸಿದರು.


ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ನಾರಾಯಣ ಭಟ್ ಮತ್ತು ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *