Breaking
15 Oct 2026, Thu

ರಾಜ್ಯಮಟ್ಟದ ಕಲಾಸ್ಪರ್ಧೆಯಲ್ಲಿ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿಗೆ ಚಾಂಪಿಯನ್ ಪಟ್ಟ

ಬಂಟ್ವಾಳ: ನೆರಳಕಟ್ಟೆಯ ಜನಪ್ರಿಯ ಗಾರ್ಡನ್‌ನಲ್ಲಿ ನಡೆದ CSWC (Centre of Samastha Women’s Colleges) ಕರ್ನಾಟಕ ರಾಜ್ಯಮಟ್ಟದ ಕಲಾಸ್ಪರ್ಧೆಯಲ್ಲಿ ಶಾಂತಿಅಂಗಡಿ ಮಿತ್ತಬೈಲ್‌ನ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ದಾರುಲ್ ಉಲೂಮ್ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಕಲಾ ಪ್ರಕಾರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದರು. ಈ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿಯರ ಈ ಸಾಧನೆಯು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಕ್ಷೇತ್ರಗಳಲ್ಲಿಯೂ ನೀಡಲಾಗುತ್ತಿರುವ ಪ್ರೋತ್ಸಾಹ ಮತ್ತು ತರಬೇತಿಗೆ ಸಾಕ್ಷಿಯಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಹಾಗೂ ಅವರಿಗೆ ಮಾರ್ಗದರ್ಶನ ನೀಡಿ ತರಬೇತಿ ನೀಡಿದ ಶಿಕ್ಷಕ ವೃಂದಕ್ಕೆ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿನ ಆಡಳಿತ ಮಂಡಳಿಯು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಸಾಧನೆ ಮಾಡಿ ಸಂಸ್ಥೆ ಹಾಗೂ ನಾಡಿಗೆ ಕೀರ್ತಿ ತರಲಿ ಎಂದು ಆಡಳಿತ ಮಂಡಳಿ ಶುಭ ಹಾರೈಸಿದೆ.

Leave a Reply

Your email address will not be published. Required fields are marked *