Breaking
5 Oct 2026, Mon

ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಟ್ರಸ್ಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಲಡ್ಕ: ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಟ್ರಸ್ಟ್‌ ನ ಮೊದಲ ಸಭೆ ಅಕ್ಟೋಬರ್ 4ರಂದು ಮೆಲ್ಕಾರ್‌ ನ ಬಿರ್ವ ಸೆಂಟರ್ ಮಿನಿ ಹಾಲ್ ನಲ್ಲಿ ನಡೆಯಿತು. ಸಭೆಯಲ್ಲಿ ಟ್ರಸ್ಟಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಟ್ರಸ್ಟ್‌ ನ ಅಧ್ಯಕ್ಷರಾಗಿ ಚಂದ್ರಶೇಖರ್ ಸಾಲಿಯಾನ್, ಉಪಾಧ್ಯಕ್ಷರಾಗಿ ಶರತ್ ಅಮ್ಮ್ಟೂರ್, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಕಟ್ಟೆಮಾರ್, ಜತೆ ಕಾರ್ಯದರ್ಶಿಯಾಗಿ ಜಯಪ್ರಶಾಂತ್ (ಸ್ಟಾರ್ ನೆಟ್ವರ್ಕ್) ಹಾಗೂ ಕೋಶಾಧಿಕಾರಿಯಾಗಿ ದಿನೇಶ್ ಕೃಷ್ಣಕೋಡಿ ಆಯ್ಕೆಯಾಗಿದ್ದಾರೆ.


ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ನಿವೇಶನ ಖರೀದಿ ಹಾಗೂ ನೂತನ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ಕಾನೂನುಬದ್ಧವಾಗಿ ನೋಂದಣಿಯಾದ ಟ್ರಸ್ಟ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ನೂತನ ಟ್ರಸ್ಟ್ ರಚಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ತಿಳಿಸಿದರು.
ನೂತನ ಟ್ರಸ್ಟ್ ನ ಉದ್ದೇಶಿತ ಕಾರ್ಯಗಳಿಗೆ ಬಿಲ್ಲವ ಸಮಾಜ ಸೇವಾ ಸಂಘದ ಸರ್ವ ಸದಸ್ಯರು ಪೂರ್ಣ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *