Breaking
15 Oct 2026, Thu

ಇರ್ವತ್ತೂರುಪದವಿನಲ್ಲಿ ‘ದಶಾರದ ಪುರಸ್ಕಾರ’ ಪ್ರದಾನ

ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಅ.18 ಮತ್ತು 19ರಂದು ನಡೆಯಲಿರುವ ಶ್ರೀ ಶಾರದಾ ಪೂಜಾ ದಶಮಾನೋತ್ಸವ ‘ದಶಾರದ ಸಂಭ್ರಮ-2026’ರ ಅಂಗವಾಗಿ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆದ ದಸರಾ ಕ್ರೀಡೋತ್ಸವದಲ್ಲಿ ವಿವಿಧ ಕ್ಷೇತ್ರಗಳ 10 ಸಾಧಕರು ಹಾಗೂ ಎರಡು ಸಂಘಟನೆಗಳಿಗೆ ‘ದಶಾರದ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಧಾರ್ಮಿಕ, ವೈದಿಕ, ಉದ್ಯಮ, ಸಾಮಾಜಿಕ ಸೇವೆ, ಕೃಷಿ, ಸಾಹಿತ್ಯ, ಸಾಂಸ್ಕೃತಿಕ, ಕಲೆ, ಮಾಧ್ಯಮ, ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು.

ವೇದಮೂರ್ತಿ, ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಣ್ಣಾಯ ನಡ್ವಂತಾಡಿ (ಧಾರ್ಮಿಕ ಮತ್ತು ವೈದಿಕ ಸೇವೆ), ಅಬ್ದುಲ್ ನಝೀರ್ ಸಾಹೇಬ್ ಇರ್ವತ್ತೂರು (ಉದ್ಯಮ ಮತ್ತು ಸಾಮಾಜಿಕ ಸೇವೆ), ಡೇನಿಸ್ ಫೆರ್ನಾಂಡೀಸ್ ದೇರೊಟ್ಟು (ಕೃಷಿ ಮತ್ತು ಸಾಮಾಜಿಕ ಸೇವೆ), ವೆಂಕಪ್ಪ ಮೂಲ್ಯ ಬಂಗೇರಕೆರೆ (ನಿವೃತ್ತ ಯೋಧ ಹಾಗೂ ಸಾಮಾಜಿಕ ಸೇವೆ), ದೇಜಪ್ಪ ಬಾಚಕೆರೆ (ದೈವಾರಾಧನೆ ಮತ್ತು ಧಾರ್ಮಿಕ ಸೇವೆ), ಆಲದಪದವು ಗೋಪಾಲ ಅಂಚನ್ (ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ), ರತ್ನದೇವ್ ಪುಂಜಾಲಕಟ್ಟೆ (ಕಲೆ ಮತ್ತು ಮಾಧ್ಯಮ ಸೇವೆ), ಮುರಳಿಕೃಷ್ಣ ರಾವ್ (ಚಿತ್ರಕಲೆ ಮತ್ತು ರಂಗಭೂಮಿ ಸೇವೆ), ವಿಷ್ಣುಪ್ರಿಯಾ ಪೈ (ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕಿ) ಹಾಗೂ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ (ಭರತನಾಟ್ಯ ಮತ್ತು ಕರಾಟೆ ಶಿಕ್ಷಕಿ) ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸೇವೆಗಾಗಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಇರ್ವತ್ತೂರು ಘಟ ಸಮಿತಿ ಹಾಗೂ ಕ್ರೀಡೆ ಮತ್ತು ಆರೋಗ್ಯ ಸೇವೆಗಾಗಿ ಕೆ.ಕೆ.ಆರ್. ಸ್ಪೋರ್ಟ್ಸ್ ಕ್ಲಬ್ ಆ್ಯಂಡ್ ಹೆಲ್ತ್ ಲೈನ್, ಇರ್ವತ್ತೂರು ಕಲಾಬಾಗಿಲು ಸಂಘಟನೆಗಳಿಗೂ ‘ದಶಾರದ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದಕ್ಕೆ ಗುರುವಂದನೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಹರ್ಷ ಸಂಪಿಗೆತ್ತಾಯ, ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ, ಸಿದ್ಧಕಟ್ಟೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಹಾಗೂ ಉದ್ಯಮಿಗಳಾದ ಲಾದ್ರೂ ಮೆನೇಜಸ್, ಸುದರ್ಶನ್ ಬಜ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಕಾರ್ಯಾಧ್ಯಕ್ಷ ಟಿ. ಹರೀಂದ್ರ ಪೈ, ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಸಂಚಾಲಕ ಮೋಹನ್ ಶೆಟ್ಟಿ ನರ್ವಲ್ದಡ್ಡ, ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್. ಎರ್ಮೆನಾಡು, ನಿರ್ದೇಶಕರಾದ ಸುದೀಂದ್ರ ಶೆಟ್ಟಿ ಎರ್ಮೆನಾಡು, ಸುಪ್ರೀತ್ ಜೈನ್ ಎಡ್ತೂರುಗುತ್ತು, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಶೇಖರ ಕರ್ಕೇರಾ ಕಯ್ಯಾಬೆ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬೆನಕ, ಸಂಚಾಲಕ ಶಂಕರ ಶೆಟ್ಟಿ ಬೆದ್ರಮಾರು ಹಾಗೂ ಶಾರದೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಹಾಸ ನಾಯ್ಕ ಎರ್ಮೆನಾಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *