Breaking
9 Oct 2026, Fri

ಯುವವಾಹಿನಿ (ರಿ.)ಬಂಟ್ವಾಳ ಘಟಕದ ಗುರುತತ್ವವಾಹಿನಿ ಮಾಲಿಕೆ 81

ಬಂಟ್ವಾಳ: ಸಮಾಜದಲ್ಲಿ ಪ್ರಸ್ತುತ ಎದುರಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹೇಳಿದರು.


ಅವರು ಅಕ್ಟೋಬರ್ 8ರಂದು ಗುರುವಾರ ಮಂಜುಳಾ–ನಾಗೇಶ್ ಪೂಂಜರೆಕೋಡಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಆಯೋಜಿಸಲಾದ ‘ಗುರುತತ್ವವಾಹಿನಿ’ ಮಾಲಿಕೆ–81 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.


ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಸಂಘಟನೆ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣದಿಂದ ಜ್ಞಾನ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಘಟನೆಯ ಮೂಲಕ ಸಮಾಜದ ಜನರನ್ನು ಒಗ್ಗೂಡಿಸಿ, ಪರಸ್ಪರ ಸಹಕಾರದೊಂದಿಗೆ ಪ್ರಗತಿಯತ್ತ ಸಾಗಬಹುದು. ಆದ್ದರಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಂಘಟನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸಂಘಟನಾ ಕಾರ್ಯದರ್ಶಿ ನಾಗೇಶ್ ಕೊಂಕಣಪದವು, ಉಪಾಧ್ಯಕ್ಷ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜೀತ್ ಅಮೀನ್ ಏರಮಲೆ, ನಿರ್ದೇಶಕರಾದ ನವೀನ್ ಕಾರಾಜೆ, ನವೀನ್ ಕುಡ್ಮೆರ್, ಜಗನ್ನಾಥ್ ಕಲ್ಲಡ್ಕ, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ಉದಯ್ ಮೇನಾಡ್, ಚಿಂತನ್ ಕಡಂಬಳಿಕೆ, ಮಧುಸೂದನ್ ಮದ್ವ, ರಾಜೇಶ್ ಪೂಂಜರೆಕೋಡಿ, ಹರಿಣಾಕ್ಷಿ ನಾವೂರು ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೋಡಿ, ಶ್ರೀಧರ್ ಅಮೀನ್, ಶಿವಾನಂದ, ಅರುಣ್ ಮಹಾಕಾಳಿಬೆಟ್ಟು, ಹರೀಶ್ ಕುದನೆ ಹಾಗೂ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.


ಆತಿಥ್ಯ ವಹಿಸಿದ್ದ ನಾಗೇಶ್ ಪೂಂಜರೆಕೋಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಘಟಕದ ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು. ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *